Sri Mahalakshmi
ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುವ ವಿವರ

• ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದಂದು ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ, ಹೋಮ-ಹವನ ಸಹಿತ ವಿಶೇಷ ಪೂಜೆ ಇರುತ್ತದೆ.
• ನವರಾತ್ರಿಯಲ್ಲಿ ೦೯ ದಿನ ದೇವಿಗೆ ವಿಶೇಷ ಅಲಂಕಾರ, ಹೋಮ-ಹವನ ಸಹಿತ ಪೂಜೆ ಇರುತ್ತದೆ.
• ಕಾರ್ತೀಕ ಮಾಸದ ಕಡೇ ಶುಕ್ರವಾರದಂದು ಶ್ರೀ ಮಹಾಲಕ್ಷ್ಮೀ ದೇವಿಗೆ ವಿಶೇಷ ಹೂವಿನ ಅಲಂಕಾರ, ಬೆಳಿಗ್ಗೆ ೭.೦೦ ರಿಂದ ೮.೩೦ ರವರೆಗೆ ಪಂಚಾಮೃತ ಅಭಿಷೇಕ, ಗಣಪತಿ ಹೋಮ, ನವಗ್ರಹ ಹೋಮ, ಮಹಾಲಕ್ಷ್ಮೀ ಹೋಮ, ಗ್ರಾಮದೇವತೆ ದುರ್ಗಾ ಹೋಮ, ರಥಾಂಗ ಹೋಮ, ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಬ್ರಹ್ಮರಥೋತ್ಸವ, ದೀಪೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಗ್ರಾಮಸ್ಥರಿಂದ ಆರತಿಸೇವೆ ಕಾರ್ಯಕ್ರಮ ನೆರವೇರಿಸಲಾಗುತ್ತದೆ.

ಸೇವೆಗಳ ವಿವರ
ಸಂಕಲ್ಪ ಸೇವೆ.
ವಿಶೇಷ ದರ್ಶನ.
ಸಂಕಷ್ಟಹರ ಗಣಪತಿ ಪೂಜೆ.
ಸತ್ಯನಾರಾಯಣ ಪೂಜೆ.
ಪ್ರಾಕಾರೋತ್ಸವ.
ಪಂಚಾಮೃತ ಅಭಿಷೇಕ.
ನಾಮಕರಣ ಸೇವೆ.
ಅಕ್ಷರ ಅಭ್ಯಾಸ ಸೇವೆ.
ತುಲಾಭಾರ ಸೇವೆ.
ಶ್ರೀ ಮಹಾಲಕ್ಷ್ಮೀ ಹೋಮ.
ಶಾಶ್ವತ ಸೇವೆಯ ವಿವರ
ಶಾಶ್ವತ ಸೇವೆ
ಶಾಶ್ವತ ದಾಸೋಹ ಸೇವೆ
ಕಟ್ಡ ನಿಧಿ ಕಾಣಿಕೆ
ವಿದ್ಯಾನಿಧಿ ಕಾಣಿಕೆ
ಒಂದು ದಿನದ ದಾಸೋಹ ಕಾಣಿಕೆ