ಶರನ್ನವರಾತ್ರಿ ಮಹೋತ್ಸವ – 2024
Booking

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿರುವ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದ ಬಗ್ಗೆ ಕೇಳದ ಜನರಿಲ್ಲ. ಇದು ಮನೆ ಮಾತಾಗಿರುವ ಪುಣ್ಯ ಕ್ಷೇತ್ರವಾಗಿದೆ. ಇಲ್ಲಿ ನೆಲಸಿರುವ ಮಹಾಲಕ್ಷ್ಮಿಯು ಕಾಮಿತ ಫಲವೀವ ಕಾಮಧೇನುವಾಗಿದ್ದಾಳೆ, ನೊಂದು ಬೆಂದ ಭಕ್ತರ ನೋವು ನೀಗುವ ಅಮೃತ ಮಹಿಯಾಗಿದ್ದಾಳೆ, ಬಯಕೆಗಳನ್ನು ಕೈಗೂಡಿಸುವ ಕಲ್ಪವೃಕ್ಷವಾಗಿದ್ದಾಳೆ, ಹಸಿದ ಒಡಲಿಗೆ ಅನ್ನ ನೀಡುವ ಅನ್ನಪೂರ್ಣೆಯಾಗಿದ್ದಾಳೆ. ಹಿಂದೆ ಗೊರವನಹಳ್ಳಿಗೆ ಭೇಟಿ ನೀಡಿದ್ದ ಭಕ್ತಾಧಿಗಳು ಇಂದು ಭೇಟಿ ನೀಡಿದರೆ ಬೆರಗಾಗುವಷ್ಟು ಗೊರವನಹಳ್ಳಿ ಕ್ಷೇತ್ರ ಬೆಳೆಯುವದರೊಂದಿಗೆ ಮಹಾಲಕ್ಷ್ಮಿ ದೇವಾಲಯ ಇಂದು ಭವ್ಯವಾದ ರೀತಿಯಲ್ಲಿ ಅಭಿವೃದ್ಧಿ ಗೊಂಡಿದೆ.

ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್(ರಿ)ನ ಆಡಳಿತ ಮಂಡಳಿಯವರು ದೇವಾಲಯದ ಆವರಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಪ್ರಗತಿಯಲ್ಲಿವೆ.

⮚ ಭಕ್ತಾಧಿಗಳ ಅನುಕೂಲಕ್ಕಾಗಿ ಯಾತ್ರೀನಿವಾಸ ನಿರ್ಮಾಣ ಮಾಡಲಾಗಿದೆ.

⮚ ಭಕ್ತಾಧಿಗಳ ಅನುಕೂಲಕ್ಕಾಗಿ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಿದ್ದು ಒಂದೇ ಬಾರಿಗೆ 1000-1500 ಭಕ್ತಾದಿಗಳು ಕುಳಿತು ಊಟ ಮಾಡಬಹುದಾದಂತಹ ಬೃಹತ್ ದಾಸೋಹ ಭವನ ನಿರ್ಮಿಸಲಾಗಿದೆ.

⮚ ಭಕ್ತಾದಿಗಳು ಧ್ಯಾನ ಮಾಡಲು ವಿಶ್ರಾಂತಿ ತೆಗೆದುಕೊಳ್ಳುವ ಅನುಕೂಲಕ್ಕಾಗಿ ಶ್ರೀ ಮಾತೆ ಕಮಲಮ್ಮ ಧ್ಯಾನಮಂದಿರ ನಿರ್ಮಾಣ ಮಾಡಲಾಗಿದೆ.

⮚ ಭಕ್ತಾಧಿಗಳ ಅನುಕೂಲಕ್ಕಾಗಿ ಸ್ನಾನ ಗೃಹ, ಶೌಚ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ.

⮚ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲು ಬಯಲು ರಂಗಮಂದಿರ ನಿರ್ಮಾಣ ಮಾಡಲಾಗಿದೆ.

⮚ ಪ್ರತಿ ತಿಂಗಳು ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರಗಳನ್ನು ಟ್ರಸ್ಟ್ ವತಿಯಿಂದ ನಡೆಸಲಾಗುತ್ತದೆ.

⮚ ಪ್ರತಿ ವರ್ಷ ತಾಲ್ಲೂಕಿನಲ್ಲಿರುವ ಎಲ್ಲಾ ಪ್ರೌಢಶಾಲೆ / ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ, ಇದರೊಂದಿಗೆ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟು ಪುಸ್ತಕಗಳನ್ನು ಟ್ರಸ್ಟ್ ವತಿಯಿಂದ ನೀಡಲಾಗುತ್ತಿದೆ.

⮚ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಪ್ರಾರಂಭಿಸಿರುತ್ತೇವೆ, ಇದರಲ್ಲಿ 600 ಮಕ್ಕಳು ವ್ಯಾಸಂಗ ಮಾಡುತ್ತಿರುತ್ತಾರೆ. ಇವರೆಲ್ಲರಿಗೂ ಉಚಿತ ಊಟ, ಸಮವಸ್ತ್ರ, ಪುಸ್ತಕ, ಹಾಗೂ ಲೇಖನ ಸಾಮಾಗ್ರಿಗಳನ್ನು ಟ್ರಸ್ಟ್ ವತಿಯಿಂದ ನೀಡಲಾಗುತ್ತಿದೆ.

⮚ ಅನಾಥಶ್ರಮ, ವಿಕಲಚೇತನ ಮಕ್ಕಳ ಶಾಲೆ, ವೃದ್ದಾಶ್ರಮಗಳಿಗೆ ಹಾಗೂ ಅತೀವೃಷ್ಠಿ ಮತ್ತು ಅನಾವೃಷ್ಠಿಯಿಂದ ನಷ್ಟಕ್ಕೊಳಗಾದ ಕುಟುಂಬಕ್ಕೆ ಉಚಿತ ಪಡಿತರ, ಉಡುಗೆ ಮತ್ತು ಆರ್ಥಿಕ ನೆರವು ನೀಡಲಾಗುತ್ತಿದೆ.

ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರು, ಕಾರ್ಯದರ್ಶಿ, ಧರ್ಮದರ್ಶಿ ಹಾಗೂ ಸಿಬ್ಬಂಧಿ ವರ್ಗದವರಿಗೆ ಈ ದೇವಾಲಯದ ಪರಿಸರವನ್ನು ಇನ್ನೂ ಅಧ್ಬುತವಾಗಿ ಅಭಿವೃದ್ಧಿ ಮಾಡುವ ಮಹತ್ವಾಕಾಂಕ್ಷೆ ಯೋಜನೆಗಳನ್ನು ರೂಪಿಸಿಕೊಂಡಿರುತ್ತಾರೆ, ಹಾಗೂ ನಾಡಿನ ಅತ್ಯಂತ ಹೆಸರಾಂತ ಧಾರ್ಮಿಕ ಪ್ರವಾಸಿ ಸ್ಥಳವನ್ನಾಗಿ ಮಾಡುವ ಹಂಬಲವಿರುತ್ತದೆ.

ಕ್ರ.ಸಂ.ಧರ್ಮದರ್ಶಿಗಳ ಹೆಸರು ಪಧನಾಮ
01ಶ್ರೀ ಬಿ.ಜಿ.ವಾಸುದೇವ ಅಧ್ಯಕ್ಷರು
02ಶ್ರೀ ಮುರಳೀಕೃಷ್ಣ.ಆರ್.ಕಾರ್ಯದರ್ಶಿ
03ಆರ್.ಜಗದೀಶ್ಖಜಾಂಚಿ
04ಶ್ರೀ ಡಾ|| ಲಕ್ಷ್ಮೀಕಾಂತ.ಟಿ.ಎಸ್.ಧರ್ಮದರ್ಶಿ
05ಶ್ರೀ ನಟರಾಜು.ಟಿ.ಆರ್.ಧರ್ಮದರ್ಶಿ
06ಶ್ರೀ ಶ್ರೀಪ್ರಸಾದ್.ಎಸ್.ಧರ್ಮದರ್ಶಿ
07ಶ್ರೀ ರವಿರಾಜೇಅರಸ್.ಧರ್ಮದರ್ಶಿ
08ಶ್ರೀ ಚಿಕ್ಕನರಸಯ್ಯಧರ್ಮದರ್ಶಿ
09ಶ್ರೀ ಓಂಕಾರೇಶ್.ಧರ್ಮದರ್ಶಿ
10ಶ್ರೀ ಮಂಜುನಾಥ.ಜಿ.ಎಲ್.ಧರ್ಮದರ್ಶಿ
11ವಿ.ಬಾಲಕೃಷ್ಣ.ಧರ್ಮದರ್ಶಿ
12ಶ್ರೀ ನರಸರಾಜು.ಧರ್ಮದರ್ಶಿ
13ಶ್ರೀ ಲಕ್ಷ್ಮೀನರಸಯ್ಯ.ಧರ್ಮದರ್ಶಿ
14ಶ್ರೀ ಎನ್.ಜಿ.ನಾಗರಾಜು.ಧರ್ಮದರ್ಶಿ

Sri Mahalakshmi temple is located in Goravanahalli, Koratagere Tq, Tumkur Dist of Karnataka State. It is a well Known Devotional place providing and full filling the Will and wishes of the people with their Greivenesses.

It is a Developing sacred place performing various developing activities. The few of them are Free Eye surgery & Health checkup camps in every month.

⯌ Free Meals Program for the visiting Devotees.

⯌ Free Bath rooms & Toilets for the public.

⯌ Open Air Theatre for cultural activities.

⯌ 1000-1500 Free Marriages Every years.

⯌ Excellence awards for the Students of Surrounding Schools and Colleges.

⯌ Award of Free Note – Books for the students of all categories.

⯌ Mahalakshmi charitable trust Started Free Primary School & High School in the year 2003 where more than 400 Students are Getting Benefited.

⯌ From the year 2009 We Started Polytechnic Campus. Generating Skilled Generation accommodating More than 450 Students. The Technical Campus is Build with ‘State of the Art’ Laboratory with trained Faculties.

Also for the public we planned to Start an additional well furnished Building For Free meals Program. In Addition to this we obtained a Land from Concerned authorities to construct Hostels for the polytechnic students.

The above Programmes are getting implemented by the honorary people of the Trust. The President, Secretary, Treasurer, Trustees & Employs. They are all in a wish to develop the staid place a sacred one.