ಶ್ರೀ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆಗಾಗಿ ಹೊಸ ದಾಸೋಹ ನಿಲಯವನ್ನು ನಿರ್ಮಿಸಲಾಗಿದ್ದು, ಒಂದೇ ಬಾರಿ ಒಟ್ಟು ೧೦೦೦ ಜನ ಭಕ್ತಾದಿಗಳು ಕುಳಿತುಕೊಂಡು ಊಟ ಮಾಡಲು ಸ್ಟೈನೆಲೆಸ್ಸ್ ಸ್ಟೀಲ್ ೨೫೦ ಟೇಬಲ್ ಜೊಡಣೆ ಸಹಿತ ೧೦೦೦ ಚೇರ್‌ಗಳನ್ನು ಅಳವಡಿಸಲಾಗಿದೆ,ಅಡುಗೆ ತಯಾರಿಸಲು ಆಧುನಿಕ ಸ್ಟೀಮ್ ಬಾಯ್ಲರ್ ವ್ಯವಸ್ಥೆ, ... ತಟ್ಟೆ ಮತ್ತು ಲೋಟಗಳನ್ನು ತೊಳೆಯಲು ಬಿಸಿ ನೀರಿನ ವ್ಯವಸ್ಥೆ, ಶಿಶುಗಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಶ್ರೀ ಮಹಾಲಕ್ಷ್ಮಿ ದಾಸೋಹ ಭವನದ ಊಟದ ವ್ಯವಸ್ಥೆಯ ಸಮಯ: ತಿಂಡಿ- ಬೆಳಿಗ್ಗೆ 8.00 ಗಂಟೆಯಿಂದ 9.30ರ ವರೆಗೆ, ಊಟ- ಬೆಳಿಗ್ಗೆ 10.30 ರಿಂದ ಸಂಜೆ 4.00 ಗಂಟೆಯವರೆಗೆ, ರಾತ್ರಿ ಊಟ 7.00 ಗಂಟೆಯಿಂದ 8.30 ರ ವರೆಗೆ
ಭಕ್ತಾದಿಗಳ ಯಾತ್ರಾತ್ರಿಗಳ ಅನುಕೂಲಕ್ಕಾಗಿ ಯಾತ್ರಿನಿವಾಸ್ ೩ ಬ್ಲಾಕ್‌ಗಳಲ್ಲಿ ನಿರ್ಮಿಸಲಾಗಿದ್ದು, ಯಾತ್ರಿನಿವಾಸ್ ಬ್ಲಾಕ್-೧ ಒಟ್ಟು ೧೦ ಕೊಠಡಿಗಳಿದ್ದು,ಕೊಠಡಿ ಸಂಖ್ಯೆ-೧ ನ್ನು ಆಫೀಸ್ ರೂಂಗೆ ಹಾಗೂ ಕೊಠಡಿ ಸಂಖ್ಯೆ-೦೭ ನ್ನು ಸ್ಟೋರ್ ರೂಮ್‌ಗೆ ಬಳಸಲಾಗಿದ್ದು, ಪ್ರತಿ ರೂಮ್‌ಗೆ ಅಟಾಚ್ ಬಾತ್‌ರೂಂ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಿಸಿನೀರಿಗೆ ಸೋಲಾರ್ ಸೌಲಭ್ಯವಿರುತ್ತದೆ. ಯಾತ್ರಿನಿವಾಸ್ ಬ್ಲಾಕ್-೨ ಒಟ್ಟು ೦೩ ಕೊಠಡಿಗಳಿದ್ದು, ಪ್ರತಿ ರೂಮ್‌ಗೆ ಅಟಾಚ್ ಬಾತ್‌ರೂಂ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಿಸಿನೀರಿಗೆ ಸೋಲಾರ್ ಸೌಲಭ್ಯವಿರುತ್ತದೆ. ಯಾತ್ರಿನಿವಾಸ್ ಬ್ಲಾಕ್-೩ ಒಟ್ಟು ೦೭ ಕೊಠಡಿಗಳಿದ್ದು, ಪ್ರತಿ ರೂಮ್‌ಗೆ ಅಟಾಚ್ ಬಾತ್‌ರೂಂ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಿಸಿನೀರಿಗೆ ಸೋಲಾರ್ ಸೌಲಭ್ಯವಿರುತ್ತದೆ.
ಉಚಿತ ಆರೋಗ್ಯ ತಪಾಸಣಾ ಮತ್ತು ಉಚಿತ ಕಣ್ಣಿನ ತಪಾಸಣಾ ಶಿಬಿರ